ಕಾರ್ಕಳ: ನಮ್ಮ ಕರಾವಳಿಯಲ್ಲಿ ಇತಿಹಾಸ ನಿರ್ಮಿತ ಕಲೆ ಯಕ್ಷಗಾನ .ಅಂತಹ ಕಲೆ ಉಳಿದು ಮುಂದಿನ ಜನಾಂಗಕ್ಕೆ ದಾಟಿಸುವ ಕೆಲಸ ನಮ್ಮ ಕಾರ್ಕಳದ ಯಕ್ಷ ಕಲಾರಂಗ ಸಂಸ್ಥೆಯು ಕಳೆದ ಹನ್ನೆರಡು ವರ್ಷಗಳಿಂದ ಮಾಡುತ್ತಿದೆ.
ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ ಮಂಗಳೂರಿನ ಯಕ್ಷದ್ರುವ ಪಟ್ಲ ಪೌಂಡೇಶನ್ ಟ್ರಸ್ಟ್ ನ ಯಕ್ಷಗಾನ ನಾಟ್ಯ ತರಬೇತಿ ಅಭಿಯಾನ 2024ರ ಯೋಜನೆಯಡಿಯಲ್ಲಿ ಜಂಟಿಯಾಗಿ ತಾಲೂಕಿನ ಹದಿಮೂರು ವಿದ್ಯಾ ಸಂಸ್ಥೆಯಲ್ಲಿ ಆಸಕ್ತ ವಿದ್ಯಾರ್ಥಿಗಳಿಗೆ ಉಚಿತವಾಗಿ ಯಕ್ಷ ಶಿಕ್ಷಣ ನೀಡಲು ಮುಂದಾಗಿದೆ.
ಅದರಂತೆ ಕಳೆದ ಶನಿವಾರ ಕಾರ್ಕಳದ ಹಿರ್ಗಾನ ಚಿಕ್ಕಲ್ ಬೆಟ್ಟು ಸ.ಹಿ.ಪ್ರಾ ಶಾಲೆಯಲ್ಲಿ ಉದ್ಘಾಟನೆ ಗೊಂಡಿತು. ಚಿಕ್ಕಲ್ ಬೆಟ್ಟು ಗ್ರಾಮ ಪಂ. ಅಧ್ಯಕ್ಷ ಸಂಜೀವ ಪೂಜಾರಿಯವರ ಅದ್ಯಕ್ಷತೆಯಲ್ಲಿ ಮುಂಬಯಿ ಉದ್ಯಮಿ ಹಿರ್ಗಾನ ಕೃಷ್ಣ ಬೆಟ್ಟು ಶ್ರೀನಾಥ್ ಶೆಟ್ಟಿ ತರಗತಿ ಉದ್ಘಾಟಿಸಿ ಇಂತಹ ಕಲೆಗಳು ನಮ್ಮ ಜೀವನದಲ್ಲಿ ಆರೋಗ್ಯಕರ, ಮನಸ್ಸಿಗೆ ನೆಮ್ಮದಿ ಜೊತೆಗೆ ಸಂತೋಷ ಸಿಗುತ್ತದೆ ಎಂದರು. ಯಕ್ಷ ಕಲಾರಂಗದ ಅದ್ಯಕ್ಷ ಉದ್ಯಮಿ ವಿಜಯ ಶೆಟ್ಟಿ, ಕೋಶಾಧಿಕಾರಿ ಪ್ರೊ. ಶ್ರೀವರ್ಮ ಅಜ್ರಿ, ಪ್ರ.ಕಾರ್ಯದರ್ಶಿ ಮಹಾವೀರ ಪಾಂಡಿ ಕಾಂತಾವರ, ನಿವೃತ್ತ ಶಿಕ್ಷಕ ಜನಾರ್ಧನ ಹೆಗ್ಡೆ, ಶಾಲಾ ಆಡಳಿತ ಮಂಡಳಿಯ ತಾರಾನಾಥ ಶೆಟ್ಟಿ, ಯಕ್ಷಗಾನದ ಶಿಕ್ಷಕ ವೆಂಕಟೇಶ್ ದೋಂಡ್ಯ, ಹಾಗೂ ಪಂ. ಸದಸ್ಯರು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ಉದಯ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಗೌರವ ಶಿಕ್ಷಕಿ ಶ್ರೀಮತಿ ಆಶಾ ವಂದಿಸಿದರು.