ಅಮೇರಿಕಾದಲ್ಲಿ 75 ದಿನಗಳ ಯಕ್ಷಯಾನವನ್ನು ಯಶಸ್ವಿಯಾಗಿ ಪೂರೈಸಿ, ಯಕ್ಷಗಾನದ ಕೀರ್ತಿಪತಾಕೆಯನ್ನು ವಿದೇಶಗಳಲ್ಲಿ ಹಾರಿಸಿ ತಾಯ್ನಾಡಿಗೆ ಮರಳಿದ ಬೆನ್ನಲ್ಲೇ, ಟ್ರಸ್ಟಿನ ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿ ಅವರ ನೇತೃತ್ವದ ಯಕ್ಷಧ್ರುವ ಪಟ್ಲ ಫೌಂಡೇಶನ್ ಯೂರೋಪ್ ಘಟಕದ ಉದ್ಘಾಟನಾ ಸಮಾರಂಭ ಅಕ್ಟೋಬರ್ 3ರಂದು ಜರ್ಮನಿಯಲ್ಲಿ ನೆರವೇರಲಿದೆ.
ಈ ಮೂಲಕ ಯೂರೋಪ್ ರಾಷ್ಟ್ರದಲ್ಲಿ ಪ್ರಾರಂಭವಾಗುವ ಕರಾವಳಿ ಮೂಲದ ಟ್ರಸ್ಟ್ ಎಂಬ ಹೆಗ್ಗಳಿಕೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಪ್ರಾಪ್ತವಾಗಲಿದೆ. ಯುರೋಪ್ ಘಟಕ ಪ್ರಾರಂಭಿಸುವಲ್ಲಿ ಸಹಕರಿಸಿದ ಯೂರೋಪ್ ಘಟಕದ ಅಧ್ಯಕ್ಷರಾದ ಶ್ರೀ ನರೇಂದ್ರ ಶೆಣೈ ಕೊಪ್ಪ, ಕಾರ್ಯದರ್ಶಿಗಳಾದ ಶ್ರೀ ಅಜಿತ್ ಪ್ರಭು ತಲ್ಲೂರು, ಜೊತೆಕಾರ್ಯದರ್ಶಿ ಶ್ರೀ ಅರವಿಂದ ಸುಬ್ರಹ್ಮಣ್ಯ ಹಾಗೂ ಎಲ್ಲಾ ಪದಾಧಿಕಾರಿಗಳಿಗೆ ಪಟ್ಲ ಟ್ರಸ್ಟಿನ ಕೇಂದ್ರೀಯ ಸಮಿತಿಯ ಪರವಾಗಿ ಧನ್ಯವಾದಗಳನ್ನು ಅರ್ಪಿಸಲಾಗಿದೆ,