ಪಟ್ಲ ಸತೀಶ್ ಶೆಟ್ಟಿಯವರ ಸಾರಥ್ಯದಲ್ಲಿ ಮೀರಾಭಯಂದರ್ ನಲ್ಲಿ ಜರಗಲಿರುವ ಪಾವಂಜೆ ಮೇಳದ ರಾಮ ರಾಮ ಶ್ರೀ ರಾಮ ಅದ್ದೂರಿ ಯಕ್ಷಗಾನ ಬಯಲಾಟ ಕಾರ್ಯಕ್ರಮದ ಪೂರ್ವಭಾವಿ ಸಭೆ, ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ನಡೆಯಿತು.
ಮಹಾರಾಷ್ಟ್ರ ರಾಜ್ಯದ ಯಕ್ಷಗಾನ ಬಯಲಾಟದ ಇತಿಹಾಸದಲ್ಲೇ, ಕಳೆದ ವರ್ಷ ಪಟ್ಲ ಸಾರಥ್ಯದ ಶ್ರೀ ಜ್ಞಾನಶಕ್ತಿ ಸುಬ್ರಮಣ್ಯ ಕೃಪಾಪೋಷಿತ ಯಕ್ಷಗಾನ ಮಂಡಳಿ ಪಾವಂಜೆ ಮೇಳದ ಯಕ್ಷಗಾನ ಪ್ರದರ್ಶನಕ್ಕೆ ಜನಸಾಗರದ ಮೂಲಕ ದಾಖಲೆ ಬರೆದಿತ್ತು.
ಮಹೇಶ್ ಶೆಟ್ಟಿ ಕುಡುಪುಲಾಜೆರವರ ಮಾರ್ಗದರ್ಶನದಲ್ಲಿ, ಸಚ್ಚಿದಾನಂದ್ ಶೆಟ್ಟಿಯವರ ನೇತೃತ್ವದ, ಅರುಣ್ ಶೆಟ್ಟಿ ಪಣಿಯೂರುರವರ ಅಧ್ಯಕ್ಷತೆಯಲ್ಲಿ ಟೀಮ್ ಯುವ ಬ್ರಿಗೇಡ್ ಮೀರಾ ಭಯಂದರ್ ವತಿಯಿಂದ ಅಕ್ಟೋಬರ್ 20ನೇ ತಾರೀಕು ಸಂಜೆ 3 ಗಂಟೆಗೆ “ರಾಮ ರಾಮ ಶ್ರೀ ರಾಮ” ಯಕ್ಷಗಾನ ಬಯಲಾಟ ಕಾರ್ಯಕ್ರಮ ಜರಗಲಿದೆ. ತ್ರಿರಂಗ ಸಂಗಮದ ಸಂಯೋಜನೆಯಲ್ಲಿ ಯಕ್ಷ ಕಾಮಧೇನು, ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರ ಗಾನಾಮೃತದೊಂದಿಗೆ, ಶ್ರೀ ಜ್ಞಾನಶಕ್ತಿ ಸುಬ್ರಮಣ್ಯ ಕೃಪಾಪೋಷಿತ ಯಕ್ಷಗಾನ ಮಂಡಳಿ ಪಾವಂಜೆ ಮೇಳದ ಸುಪ್ರಸಿದ್ದ ಕಲಾವಿದರ ಕೂಡುವಿಕೆಯಲ್ಲಿ ಈ ಬಯಲಾಟ ನಡೆಯಲಿದೆ.
ಆಯೋಜನೆಯ ಪೂರ್ವಭಾವಿ ಸಭೆ ಮತ್ತು ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಮೀರಾ ಭಯಂದರ್ ನ ತುಂಗಾ ಹಾಸ್ಪಿಟಲ್ ನ ಆಡಳಿತ ನಿರ್ದೇಶಕರಾದ ಡಾ. ಸತೀಶ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಆಸ್ಪತ್ರೆಯ ತಳಮಹಡಿಯ ಸಭಾಗೃಹದಲ್ಲಿ ಜರಗಿತು.