ಯಕ್ಷಧ್ರುವ ಪಟ್ಲ ಪೌಂಡೇಶನ್ ಪಳ್ಳಿ ನಿಂಜೂರು ಇದರ ವತಿಯಿಂದ ಪಳ್ಳಿ ಶಾಲಾ ಮಕ್ಕಳಿಗೆ ಯಕ್ಷ ಶಿಕ್ಷಣ ನಾಟ್ಯ ತರಬೇತಿ ಶಿಕ್ಷಣ ಅಭಿಯಾನ ಕಾರ್ಯಕ್ರಮವನ್ನು ಬಹುಮೇಳಗಳ ವ್ಯವಸ್ಥಾಪಕರಾದ ಪಳ್ಳಿ ಕಿಶನ್ ಹೆಗ್ಡೆ ಉದ್ಘಾಟಿಸಿದರು.
ವೇದಿಕೆಯಲ್ಲಿ ಪಳ್ಳಿ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರಾದ ಜಗದೀಶ್ ಹೆಗ್ಡೆ ಪಳ್ಳಿ ಪೇಜಕೊಡಂಗೆ, ಪಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉಷಾ ಅಂಚನ್, ಶಾಲಾ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಪ್ರಭಾಕರ್ ಬಂಗೇರ, ಪಟ್ಲ ಫೌಂಡೇಶನ್ ಪಳ್ಳಿ ನಿಂಜೂರು ಘಟಕದ ಅಧ್ಯಕ್ಷರು ಸುನಿಲ್ ಬಿ ಶೆಟ್ಟಿ, ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಕಾಂತ್ ಪ್ರಭು, ಮನೋಹರ್ ಶೆಟ್ಟಿ, ರಘುನಾಥ್ ಶೆಟ್ಟಿ, ಜಯರಾಮ ಶೆಟ್ಟಿ, ಚಂದ್ರಶೇಖರ್ ಶೆಟ್ಟಿ, ಕಾಂತೆಶ್ ಶೆಟ್ಟಿ, ವಿಜಯ ಮ್ ಶೆಟ್ಟಿಮತ್ತು ಶಾಲಾ ಮುಖ್ಯೋಪಾಧ್ಯಾಯಿನಿ ನಾಗರತ್ನ, ಹಾಗೂ ಯಕ್ಷ ಗುರುಗಳಾದ ಮಹಾವೀರ್ ಪಾಂಡಿ ಉಪಸ್ಥಿತರಿದ್ದರು ಚಿತ್ರ ವಿನಯ್ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.