ಇಂದಿನಿಂದ (ಜುಲೈ 9) ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಕಲಾವಿದರ ತಂಡ ಯಕ್ಷಗಾನ ಅಭಿಯಾನಕ್ಕಾಗಿ ಅಮೇರಿಕಾ ಪ್ರವಾಸ ಕೈಗೊಳ್ಳುತ್ತಿದೆ.
ಈ ಟ್ರಸ್ಟ್ ಅಮೇರಿಕಾ ಸರ್ಕಾರದ ಮಾನ್ಯತೆ (ರಿಜಿಸ್ಟರ್ಡ್) ಪಡೆದಿದ್ದು ಪುತ್ತಿಗೆ ಮಠದ ಶ್ರೀ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರ ಶುಭಾಶೀರ್ವಾದದಲ್ಲಿ ಹಾಗೂ ಭಾಗವತ ಪಟ್ಲ ಸತೀಶ್ ಶೆಟ್ಟಿಯವರ ನೇತೃತ್ವದಲ್ಲಿ ಅಮೇರಿಕಾ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಸೆಪ್ಟೆಂಬರ್ 20ರ ತನಕ ಯಕ್ಷಗಾನ ಪ್ರದರ್ಶನ ನೀಡಲಿದೆ.
ಪಟ್ಲ ಟ್ರಸ್ಟಿನ ಒಂಭತ್ತು ಹೆಸರಾಂತ ಕಲಾವಿದರು, 75 ದಿವಸಗಳ ಈ ಪ್ರವಾಸದ ಅವಧಿಯಲ್ಲಿ ವಿವಿಧಢೆ ಯಕ್ಷಗಾನದ ಕಾರ್ಯಕ್ರಮ ಹಾಗೂ ತರಬೇತಿ ಶಿಬಿರಗಳನ್ನು ನಡೆಸಿಕೊಡಲಿದ್ದಾರೆ.
ಹಿಮ್ಮೇಳ: ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ, ಪದ್ಮನಾಭ ಉಪಾಧ್ಯಾಯ, ಚೈತ್ಯನ್ಯ ಕೃಷ್ಣ ಪದ್ಯಾಣ
ಮುಮ್ಮೇಳ: ಪ್ರೋ. ಎಂ.ಎಲ್ ಸಾಮಗ, ಹರಿನಾರಾಯಣ ಭಟ್ ಎಡನೀರು, ಚಂದ್ರಶೇಖರ ಧರ್ಮಸ್ಥಳ, ಮಹೇಶ್ ಮಣಿಯಾಣಿ, ಪ್ರಶಾಂತ್ ನೆಲ್ಯಾಡಿ ಮತ್ತು ಮೋಹನ್ ಬೆಳ್ಳಿಪ್ಪಾಡಿ