ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ( ರಿ) ಮಂಗಳೂರು ಇದರ ಯಕ್ಷ ಶಿಕ್ಷಣ ಯಕ್ಷಗಾನ ತರಬೇತಿ ಅಭಿಯಾನದಡಿ ನಡೆಯುತ್ತಿರುವ ಯಕ್ಷ ಶಿಕ್ಷಣ ತರಗತಿಯ ಉದ್ಘಾಟನಾ ಸಮಾರಂಭವು, ಉರಿಮಜಲು ಕೆ ರಾಮ ಭಟ್ ಸಭಾಂಗಣ, ಶ್ರೀ ರಾಮ ಶಾಲೆ, ವೇದಶಂಕರ ನಗರ, ಉಪ್ಪಿನಂಗಡಿಯಲ್ಲಿ ಜರಗಿತು.
ಕರ್ನಾಟಕ ಸರಕಾರದ ವಿಧಾನಪರಿಷತ್ ಸದಸ್ಯರಾದ ಶ್ರೀ ಪ್ರತಾಪ್ ಸಿಂಹ ನಾಯಕ್ ಇವರಿಂದ ಯಕ್ಷ ಶಿಕ್ಷಣ ತರಬೇತಿ ಕೇಂದ್ರ ಉದ್ಘಾಟಿಸಲ್ಪಟ್ಟಿತು. ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ನ ಉಪ್ಪಿನಂಗಡಿ ಘಟಕದ ಅಧ್ಯಕ್ಷರಾದ ಶ್ರೀ ಕೆ. ಜಗದೀಶ ಶೆಟ್ಟಿ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅಭ್ಯಾಗತರಾದ ಶ್ರೀ ಗೋಪಾಲ ಶೆಟ್ಟಿ ಕಳೆಂಜ, ಇಂದ್ರಪ್ರಸ್ಥ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಶ್ರೀ ಕರುಣಾಕರ ಸುವರ್ಣ, ಶ್ರೀ ರಾಮ ಶಾಲೆಯ ಅಧ್ಯಕ್ಷರಾದ ಶ್ರೀ ಸುನೀಲ್ ಆನಾವು, ಶ್ರೀ ರಾಮ ಶಾಲೆಯ ಸಂಚಾಲಕರಾದ ಶ್ರೀ ಯು.ಜಿ ರಾಧ, ಶ್ರೀ ರಾಮ ಶಾಲೆಯ ಪೋಷಕ ವೃಂದದ ಅಧ್ಯಕ್ಷರಾದ ಮೋಹನ್ ಭಟ್, ಯಕ್ಷಗುರುಗಳಾದ ಶ್ರೀ ಸತೀಶ ಆಚಾರ್ಯ ಮಾಣಿ ವೇದಿಕೆಯಲ್ಲಿ ವಿರಾಜಮಾನರಾಗಿದ್ದರು.
ಕಾರ್ಯಕ್ರಮದಲ್ಲಿ ಯನ್. ಉಮೇಶ್ ಶೆಣೈ, ಕಂಗ್ವೆ ವಿಶ್ವನಾಥ ಶೆಟ್ಟಿ, ಜಯಂತ ಪೋರೋಳಿ, ಕಹಳೆ ನ್ಯೂಸ್ ನ ಶ್ಯಾಮ ಸುದರ್ಶನ್ ಹೊಸಮೂಲೆ, ಗಣೇಶ್ ವಳಾಲು, ರವೀಶ ಎಚ್ ಟಿ, ಶರತ್ ಕೋಟೆ, ಗುಣಕರ ಅಗ್ನಾಡಿ, ಕಿಶೋರ್ ಜೋಗಿ ಉಬಾರ್, ಚಂದ್ರಶೇಖರ ಶೆಟ್ಟಿ, ಚಂದ್ರಶೇಖರ ಮಡಿವಾಳ, ಲೋಕೇಶ್ ಆಚಾರ್ಯ ಸರಪಾಡಿ, ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ, ಭಾವನ ಕಲಾ ಆರ್ಟ್ಸ್ ನ ಗಣೇಶ್ ಆಚಾರ್ಯ, ಯತೀಶ್ ಶೆಟ್ಟಿ ಸುವ್ಯ, ರಾಧಾಕೃಷ್ಣ ಬೊಳ್ಳಾವು, ಅಚಲ್ ಉಬರಡ್ಕ, ಸುಧಾಕರ ಶೆಟ್ಟಿ ಗಾಂಧೀಪಾರ್ಕ್, ಉದಯ ಅತ್ರಮಜಲು, ಶಾಲಾ ಸಿಬ್ಬಂದಿ ವರ್ಗ, ಪೋಷಕ ವೃಂದ ಹಾಗೂ ಇನ್ನಿತರ ಮಹನೀಯರು ಉಪಸ್ಥಿತರಿದ್ದರು.
ಶ್ರೀರಾಮ ಶಾಲೆಯ ಪ್ರೌಢ ವಿಭಾಗದ ಮುಖ್ಯಸ್ಥ ಶ್ರೀ ರಘುರಾಮ್ ಭಟ್ ಸಿ ಇವರು ಪ್ರಸ್ತಾವನೆಯೊಂದಿಗೆ ಎಲ್ಲರನ್ನೂ ಸ್ವಾಗತಿಸಿದರು. ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ಶಾಲಾ ಶಿಕ್ಷಕಿ ಶ್ರೀಮತಿ ವಿಮಲ ತೇಜಾಕ್ಷಿ ವಂದನಾರ್ಪಣೆ ಸಲ್ಲಿಸಿದರು. ಈ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಪವಿತ್ರಾ.ಕೆ ಮತ್ತು ಶ್ರೀಮತಿ ವಿಜಿತಾ ಕುಮಾರಿ ಅಚ್ಚುಕಟ್ಟಾಗಿ ನಿರ್ವಹಿಸಿದರು. ಕಾರ್ಯಕ್ರಮದ ಬಳಿಕ ಮಕ್ಕಳಿಗೆ ಯಕ್ಷಗುರು ಶ್ರೀ ಸತೀಶ ಆಚಾರ್ಯ ಮಾಣಿ ಇವರು ಸಾಂಕೇತಿಕ ಯಕ್ಷ ಶಿಕ್ಷಣದ ಹೆಜ್ಜೆಗಾರಿಕೆಯನ್ನು ಹೇಳಿಕೊಟ್ಟರು.