ಅಮೇರಿಕಾ ದೇಶದ ಮೂಲೆ ಮೂಲೆಗೂ ಯಕ್ಷಗಾನದ ಕಂಪನ್ನು ಹರಿಸಿದ ಯಕ್ಷಧ್ರುವ ಪಟ್ಲ ಫೌಂಡೇಶನ್ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿ, ಭಾರತಕ್ಕೆ ಮರಳುತಿರುವ ನಮ್ಮ ಹೆಮ್ಮೆಯ ಕಲಾವಿದರು.
ಅಮೇರಿಕಾ ಘಟಕದ ಅಧ್ಯಕ್ಷರು ಡಾ.ಅರವಿಂದ ಉಪಾಧ್ಯಾಯರು, ಶ್ರೀಮತಿ ಲತಾ ಅರವಿಂದ, ಡಾಲಸ್ ಕಾರ್ಯಕ್ರಮದ ರೂವಾರಿಗಳು ಹಾಗೂ ಯಕ್ಷಧ್ರುವ ಫೌಂಡೇಶನ್ ನ ಪ್ರಮುಖರಾದ ನಾಗರಾಜ ಉಪಾಧ್ಯಾಯರು, ಸಾಧು ಶೆಟ್ಟಿ, ಸುಬ್ರಹ್ಮಣ್ಯ ಶ್ಯಾನುಭೋಗ್, ಶ್ರೀಪಾದ್ ಪಾಡಿಗಾರ್ ಪ್ರಶಾಂತ್ ಹೊಳ್ಳರು ಡಾಲಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಲಾವಿದರನ್ನು ಆತ್ಮೀಯವಾಗಿ ಬೀಳ್ಗೊಟ್ಟರು.